ಬುಧವಾರ, ಜುಲೈ 10, 2013



ಕರ್ನಾಟಕದಲ್ಲಿ ಮಡಿವಾಳರ ಸ್ತಿತಿ ಗತಿ ಹೇಗಿದೆ? 
ಯಾಕೆ ? 
ಪರಿಹಾರ ಏನು ? 
ಓದಿ .. ಒಮ್ಮೆ  ಯೋಚಿಸಿ -
ನಮ್ಮೊಡನೆ ಕೈ ಜೋಡಿಸಿ -
ಸಮುದಾಯಕ್ಕೆ ಕಿರು ಕಾಣಿಕೆ ಸಲ್ಲಿಸಿ 
=======================================================


ಬಡತನ(ನಾ ನೋಡಿದ ಹಾಗೆ ಮತ್ತು ನಾನೇ  ಸ್ವತಹ ಈ ಹಿಂದೆ ಒಮ್ಮೆ ಅನುಭವಿಸಿದ ಹಾಗೆ ), ಅನಕ್ಷರತೆ, ಸ್ವಂತ ಜಮೀನು ,ಮನೆ ಇಲ್ಲದಿರುವ  ಅಸಂಖ್ಯಾತ  ಮಡಿವಾಳರು ಈ ಕರುನಾಡಿನಲ್ಲಿ ಇರುವರು ಮತ್ತು ನನಗಿರುವ ಮಾಹಿತಿ ಪ್ರಕಾರ ಬಹುಪಾಲು ಬಡ ಮಡಿವಾಳರು ಉತ್ತರ ಕರ್ನಾಟಕದಲ್ಲಿಯೇ ಇರುವರು . 

ನಮ್ಮ ಮಡಿವಾಳರಲ್ಲಿ  ಎಸ್ಸೆಸೆಲ್ಸಿ  ಮುಗಿಸೋರೆ ಜಾಸ್ತಿ ,ಇನ್ನುಲಿದವರಲ್ಲಿ ಕೆಲವರು ಮಾತ್ರ ಪೀ ಯೂ ಸಿ (ಅದೂ ಆರ್ಟ್ಸ್ ಮಾತ್ರ , ಎಲ್ಲೋ ಕೆಲವರು ಕಾಮರ್ಸ್ , ಸೈನ್ಸ್ ) ಮಿಕ್ಕಂತೆ  ಡಿಗ್ರೀ ( ಅದೂ ಆರ್ಟ್ಸ್ ಮಾತ್ರ , ಎಲ್ಲೋ ಕೆಲವರು ಕಾಮರ್ಸ್ , ಸೈನ್ಸ್) ಓದುವರು ಅದೂ ನಮ್ ಕುಲ ಕಸುಬು ಮಾಡುತ್ತಾ :(((

ಬೇರೆಲ್ಲ ಜಾತಿಗಳ / ಸಮುದಾಯಗಳ ಜನ ಅವರಿಗೆ ಲಭಿಸಿದ - ಮೀಸಲಾತಿ /ಅಧಿಕಾರ / ಸಹಕಾರ ಕಾರಣವಾಗಿ  ಅವರವರ ವೃತ್ತಿ ಬಿಟ್ಟು ಮುಖ್ಯವಾಹಿನಿಗೆ ಸೇರಿ ಅಭಿವೃದ್ಧಿ ಹೊಂದಿ ಉದ್ಧಾರವಾಗಿರುವರು ,ಆದರೆ ನಮ್ ಸ್ತಿತಿ ಗತಿ  ಅಂದೂ ಇಂದೂ  ಮುಂದೂ ಹೀಗೆಯೇ ಇರಬೇಕೆ?

ಮೀಸಲಾತಿ ಬೇಕೇ?
=============
ನಮಗೂ ಮೀಸಲಾತಿ ಪಡೆಯಲು  ಹಕ್ಕಿದೆ , ಆ ಹಕ್ಕು  ನಮ್ಮ ಮಡಿವಾಳರ ಬಡತನ , ಜೀವನ ಶೈಲಿ ,ಅನಕ್ಷರತೆ ಪ್ರಮಾಣ  ಸರಿಯಾಗಿ ಸಂಶೋಧಿಸಿ ಅಧ್ಯಯನ ನಡೆಸಿ ಸರಕಾರಗಳಿಗೆ ಮನವರಿಕೆ ಮಾಡಿ ಕೊಡಬೇಕಿದೆ . ತನ್ಮೂಲಕ ಎಸ್ಸಿ ಎಸ್ಟಿಯಲ್ಲಿ  ಸೇರಿ ಮುಂದೆ ಬರೋಣ . 

ಮೀಸಲಾತಿ ಬೇಡ /ಸರಕಾರಗಳ ಹಂಗೂ ಬೇಡ ಎನ್ನುವಿರಾ?
==================================
ಸರ್ಕಾರಿ ಮುಲಾಜು ಮುತುವರ್ಜಿ/ ಹಂಗು ಬೇಡ  ಎನ್ನುವುದಾದರೆ  ಈಗಾಗ್ಲೇ ಸುಶಿಕ್ಷಿತರಾಗಿ ಮುಂದೆ ಬಂದಿರುವ ಸಿರಿವಂತ , ಕುಲ ಪ್ರಮುಖರು , ಹಿರಿಯ-  ಕಿರಿಯ ಸರಕಾರೀ /ಖಾಸಗಿ ಕ್ಷೇತ್ರಗಳ ಅಧಿಕಾರಿಗಳು ( ಹಲವು ಜನ ಇರುವರು -ಕೆಲವರು ಜಾತಿ ಹೆಸರು ಹೇಳಿಕೊಳ್ಳಲು ನಾಚಿಕೊಳ್ಳುವರು :(() )  ಸಹಾಯ ಮಾಡಬೇಕು, ಸಹಾಯ ಮಾಡಲು ಹಲವು ಜನ ಈಗಲೂ ಸಿದ್ಧರಿರುವರು.. 

ಎಲ್ಲರೂ ತನು -ಮನ -ಧನ ಪೂರ್ವಕ ಸಹಾಯ ಮಾಡಿದರೆ ನಾವ್ ಏನು ಮಾಡಬೇಕು?
=================================================
>>ಮೊದಲಿಗೆ ಹಳ್ಳಿ ಹೋಬಳಿ ತಾಲೂಕು ಮಟ್ಟದಲ್ಲಿ ಮಡಿವಾಳರಿಗಾಗಿ (ಮಡಿವಾಳ ಹುಡುಗ -ಹುಡುಗಿಯರಿಗೆ)
ಪ್ರಾಥಮಿಕ /ಮಾಧ್ಯಮಿಕ / ಹೈಸ್ಕೂಲ್ / ಕಾಲೇಜು(ವಸತಿ ಸಹಿತ -ಹಾಸ್ಟೆಲ್) ಸ್ಥಾಪನೆ . 
>>>>ಬಡ ವಿಧ್ಯಾರ್ಥಿಗಳ ಶಿಕ್ಷಣ /ಕ್ರೀಡೆಯ ಪೋಷಕತ್ವ /ಪ್ರಾಯೋಜಕತ್ವ 
>>>>ಬಡ ವಿಧ್ಯಾರ್ಥಿಗಳಿಗೆ  ಬಟ್ಟೆ ಬರೆ- ಪುಸ್ತಕ  ಬ್ಯಾಗು - ಶಿಷ್ಯವೇತನ ವಿತರಣೆ 
>>>ಕ್ರಮೇಣ ಕುಲ ಮೂಲ ವೃತ್ತಿಯನ್ನು ತ್ಯಜಿಸಿ ಸಮಾಜದ ಮುಖ್ಯ ವಾಹಿನಿಯಲ್ಲಿ ಬೆರೆಯುವ ಹಾಗೆ ಮಾಡುವುದು . 

ಹಾಗಾದ್ರೆ ಇನೇನು ಸಮಸ್ಯೆ? ಈ  ಕೆಲಸ ಈಗಲೇ  ಆರಂಭಿಸಬಹುದಲ್ಲ ಎನ್ನುವಿರಾ?
================================================

ಇಲ್ಲೇ ಸಮಸ್ಯೆ ಇರೋದು ... !!
>ಅದು ಪ್ರಾಮಾಣಿಕತೆ 
>>ಸ್ವಚ್ಛತೆ 
>>>ಪಾರದರ್ಶಕತೆ 
>>>>ದಕ್ಷತೆ 
>>>>>ನಾಯಕತ್ವ 
>>>>>>ಸಹಕಾರಗಳ ಕೊರತೆ  ಇದೆ  ;((
ನಿಮಗೆ ಗೊತ್ತಿರುವ ಹಾಗೆ  ಫೇಸ್ಬುಕ್ ಒಂದರಲ್ಲೇ ನಾ ನೋಡಿದ ಹಾಗೆ ಸುಮಾರು ೧೦ ಸಾವಿರಕ್ಕೂ ಹೆಹ್ಚು ಸುಶಿಕ್ಷಿತ ಮಡಿವಾಳರು ಇರುವರು , ಅವರೆಲ್ಲರನ್ನ ಸಂಪರ್ಕಿಸಿ ಈ ಸದುದ್ದೇಶವನ್ನು ಮನವರಿಕೆ ಮಾಡಿಕೊಡಬೇಕಿದೆ . ಅವರು ನೀಡುವ ಕೊಡುವ ತನು ಮನ ಧನ  ಸಹಾಯ - ಸಲಹೆ - ಸಹಕಾರ 'ಅಪಾತ್ರ ಧಾನ ಆಗದು - ಎಂದು ಮನವರಿಕೆ ಮಾಡಿಕೊಡಬೇಕಿದೆ   ಇದೆಲ್ಲದಕ್ಕೆ 
ವಯುಕ್ತಿಕವಾಗಿ ನನ್ ಸಹಕಾರವಿದೆ .. ಸಾಮೂಹಿಕವಾಗಿ ನಮ್ಮೆಲ ಮಡಿವಾಳ ಬಂಧುಗಳ ಸಹಕಾರ ಸಿಗಬೇಕಾದರೆ ಫೇಸ್ಬುಕ್ನಲ್ಲಿರುವ ಸಕಲ ಸಾವಿರಾರು ಜನರನ್ನು ಸಂಪರ್ಕಿಸಿ ಅವರ ಸಂಪರ್ಕ  ಸಂಖ್ಯೆ / ವಿಳಾಸ /ಉದ್ಯೋಗ ಮಾಹಿತಿ  ತೆಗದುಕೊಂಡು ಎಲ್ಲರೂ ಒಂದೆಡೆ ಸೇರಿ ಸಭೆ ನಡೆಸಿ ಮಾರ್ಗಸೂಚಿ  ರೂಪಿಸಿ ಕರುನಾಡಿನಾದ್ಯಂತ (ವಿಭಾಗವಾರು / ಜಿಲ್ಲಾ/ ತಾಲೂಕ /ಹೋಬಳಿ /ಹಳ್ಳಿ ಮಟ್ಟದಲ್ಲಿ  )ಸಂಘಟನೆ ಮಾಡಬೇಕು  ಆಮೇಲೆ ನಮ್ಮ ಹಕ್ಕಿಗಾಗಿ  ಹೋರಾಟ .. ಸಹಾಯ ಮಾಡಲು ಈಗಲೂ  ಹಲವು ಜನ  ಮಡಿವಾಳ ಹಿರಿಯರು ,ಕುಲ ಪ್ರಮುಖರು ಹಿರಿಯ ಕಿರಿಯ  ಸರಕಾರೀ- ಅರೆ ಸರಕಾರೀ ಖಾಸಗಿ  ವಲಯಗಳ   ಅಧಿಕಾರಿಗಳು  ಸಿದ್ಧರಿರುವರು .. 

ಮತ್ತೇನು ಕೊರತೆ ??
=============
ನಮ್ಮೆಲ್ಲ ಮಡಿವಾಳರನ್ನು  ಒಗ್ಗೂಡಿಸಿ / ಸೇರಿಸಿ ಕಲೆಸಿ  ಒಂದು ಸಂಘಟನೆ ಮಾಡಿ  ಹಕ್ಕೊತ್ತಾಯಗಳಿಗಾಗಿ ಒತ್ತಾಯಿಸಲು 
>  ಪ್ರಾಮಾಣಿಕತೆ 
>>ಸ್ವಚ್ಛತೆ 
>>>ಪಾರದರ್ಶಕತೆ 
>>>>ದಕ್ಷತೆ 
>>>>>ನಾಯಕತ್ವ 
>>>>>>ಸಹಕಾರಗಳನ್ನು ಕೊಡುವ  ಮಡಿವಾಳ ಜನರ   ಕೊರತೆ  ಇದೆ  ;((

ನೀವ್ ಏನ್ ಹೇಳ್ತೀರಾ?
ನಿಮ್ಮ ಅಭಿಪ್ರಾಯ /ಅನಿಸಿಕೆ ಸಲಹೆಗೆ  ಮುಕ್ತ ಆಹ್ವಾನ 
ಕನ್ನಡದಲ್ಲಿ ಟೈಪ್ ಮಾಡಲು ಉಪಯೋಗಿಸಿ 

ನಮ್ಮನ್ನು ಇಲ್ಲಿ ಸಂಪರ್ಕಿಸಿ 
http://on.fb.me/13GlKSV
venkatb೮೩@gmail.com 

ಶುಭವಾಗಲಿ 

ವೆಂಕಟೇಶ ಮಡಿವಾಳ ಬೆಂಗಳೂರು 

\।/


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ