ಮಂಗಳವಾರ, ಆಗಸ್ಟ್ 20, 2013



ಇಂದಿನ (20-08-2013) ಕನ್ನಡ ಪ್ರಭ ಪತ್ರಿಕೆಯಲ್ಲಿ 'ಮಾಗಡಿ ಮಡಿವಾಳ ಸಂಘದವರ' ಬಗ್ಗೆ ಒಂದು ವರದಿ ನೋಡಿ ..
 ಅಲ್ಲಿ ಕಾಮೆಂಟ್ ಮಾಡಿ 


link:

http://bit.ly/14xtyEM


ಅಲ್ಲಿ ಬಂದ  ವರದಿ :
----------------------------------------------------------------------------
ಮಡಿವಾಳ ಸಮಾಜ ನಿರ್ಲಕ್ಷ್ಯ: ಆಕ್ರೋಶ
First Published: 20 Aug 2013 02:00:00 AM IST

ಮಾಗಡಿ: ತೀರ ಹಿಂದುಳಿದ ಮಡಿವಾಳ ಸಮುದಾಯವನ್ನು ರಾಜಕೀಯ ಪಕ್ಷಗಳು ನಿರ್ಲಕ್ಷಿಸಿವೆ ಎಂದು ಮಾಗಡಿ ತಾಲೂಕು ಮಡಿವಾಳ ಮಾಚೀದೇವ ಸಂಘದ ಉಪಾದ್ಯಕ್ಷ ಎಂ.ಟಿ. ಶಿವಣ್ಣ ಮತ್ತಿತರರು ಆರೋಪಿಸಿದ್ದಾರೆ.

ಮಾಗಡಿ ತಾಲೂಕಿನಲ್ಲಿ ಸುಮಾರು 4 ಸಾವಿರಕ್ಕೂ ಹೆಚ್ಚು ಮಡಿವಾಳರ ಮತದಾರರಿದ್ದಾರೆ.
ಸ್ವಾತಂತ್ರ್ಯ ಬಂದಾಗಿನಿಂದಲೂ ಮಡಿವಾಳ ಸಮುದಾಯವನ್ನು ರಾಜಕೀಯ ಪಕ್ಷಗಳು ನಿರ್ಲಕ್ಷಿಸಿಕೊಂಡು ಬರುತ್ತಿವೆ. ರಾಜಕೀಯವಾಗಿ ಯಾವುದೇ ರಾಜಕೀಯ ಸ್ಥಾನ ಮಾನ ನೀಡುತ್ತಿಲ್ಲ, ಮಡಿವಾಳ ಸಮಾಜದಲ್ಲಿ ಬಹಳಷ್ಟು ತೀರ ಕಡು ಬಡತನದಿಂದ ಜೀವಿಸುತ್ತಿದ್ದಾರೆ.

ಸರ್ಕಾರ ಗುರುತಿಸಿ ಸಾಮಾಜಿಕ ಹಾಗು  ಆರ್ಥಿಕ  ಸೌಲತ್ತುಗಳನ್ನು  ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ. ನಮ್ಮ ಮಡಿವಾಳ ಸಮುದಾಯವನ್ನು ನಿರ್ಲಕ್ಷಿಸಿಕೊಂಡರು ಬರುತ್ತಿರುವ ರಾಜಕೀಯ ಪಕ್ಷವನ್ನು ತಾಲೂಕಿನ ಎಲ್ಲಾ ಮಡಿವಾಳ ಸಮಾಜ ಒಗ್ಗಟ್ಟಾಗಿ ತಿರಸ್ಕರಿಸಲಿದ್ದಾರೆ ಎಂದು ಎಂ.ಟಿ.ಶಿವಣ್ಣ ತಿಳಿಸಿದ್ದಾರೆ.

ಈ ನಿಟ್ಟಿನಲ್ಲಿ ತಾಲೂಕಿನಲ್ಲಿ ಮಡಿವಾಳರಿಗೆ ಮಡಿಕಟ್ಟೆ ನಿರ್ಮಿಸಿಕೊಳ್ಳಲು ಅನುದಾನ ಮಂಜೂರು ಮಾಡಬೇಕು. ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಬೇಕು ಎಂದು ಎಂ.ಟಿ.ಶಿವಣ್ಣ, ಉಮೇಶ್, ಎಂ.ಟಿ.ಪಿ.ರಾಜು. ರಂಗನಾಥ್. ಶ್ರೀನಿವಾಸಮೂರ್ತಿ, ವೆಂಕಟಪ್ಪ,ರಂಗಸ್ವಾಮಿ,ಮಂಜನಾಥ್, ಗಂಗರಾಜು ಇತರರು ಸರ್ಕಾರವನ್ನು ಒತ್ತಾಯಿಸಿ ಆಗ್ರಹಿಸಿದರು

---------------------------------------------------------------------------



ಶುಭವಾಗಲಿ

\।/