ಶುಕ್ರವಾರ, ಫೆಬ್ರವರಿ 7, 2014




ಮಡಿವಾಳ ಸಮಾವೇಶ -ಮಂಗಳೂರು ಫೆಬ್ರವರಿ 02 -2014 ರ ಭಾನುವಾರ 

---------------------------------------------------------------------


ಹೋದ ಭಾನುವಾರ (ಫೆಬ್ರವರಿ 02 -2014) ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆದ ದಕ್ಷಿಣ ಕನ್ನಡ ಮಡಿವಾಳರ ಸಂಘದ 75ನೇ ವರ್ಷದ ಸಮಾರಂಭಕ್ಕೆ ನಾನು ಹೋಗಿದ್ದೆ . ಅಲ್ಲಿ ಬೆಂಗಳೂರಿನ ಶ್ರೀಯುತ ಅಶೋಕ್ ದೊಮ್ಮಲೂರು ಅವರೂ ಆಗಮಿಸಿದ್ದರು. ನಾನು ಸಮಾವೇಶ ತಲುಪಿದಾಗ ಮಧ್ಯಾಹ್ನ 12ಘಂಟೆ - ಗೆಳೆಯ ಋತಿನ್ ಸಾಲಿಯಾನ್ ಸಮಾವೇಶದ ಆಗಮನ ದ್ವಾರದ ಬಳಿ ಆಗಮಿಸಿ ನನ್ನ ಕುಶಲೋಪರಿ ವಿಚಾರಿಸಿ ಸಮಾವೇಶಕ್ಕೆ ಕರೆದೊಯ್ದ.

ವಿಸ್ತಾರವಾದ ಪ್ರದೇಶದಲ್ಲಿ ಭವ್ಯ ಶಾಮಿಯಾನ ಹಾಕಿ -ಊಟ -ನೀರು -ತಂಪು ಪಾನೀಯ -ಪುಸ್ತಕ ಪ್ರದರ್ಶನ ಮಾರಾಟ ಮಳಿಗೆ ತೆರೆದಿದ್ದರು. ಎಲ್ಲವೂ ಅಚ್ಚುಕಟ್ಟಾಗಿದ್ದು ಅಲ್ಲಿ ನೆರೆದಿದ್ದ ಮಡಿವಾಳ ಬಂಧುಗಳನ್ನು ನೋಡಿ ಭಲೇ ಖುಷಿ ಆಯ್ತು .

ಬಹುತೇಕ ಎಲ್ಲ ಚೇರುಗಳು ಭರ್ತಿಯಾಗಿ ಕೆಲವು ಜನ ಬಿಸಿಲನ್ನು ಲೆಕ್ಕಿಸದೆ ಸಮಾವೇಶ ವೀಕ್ಷಿಸುತ್ತಿದ್ದರು. ಈ ಎಲ್ಲಾ ಅಚ್ಚುಕ್ಕಟ್ತಾದ ನಿರ್ವಹಣೆ ಹೊಣೆ ಹೊತ್ತವರು ರಜಾಕ ಯುತ್ಸ್.
ಪ್ರವೀಣ್ ,ಸುದರ್ಶನ್ ,ಋತಿನ್ ಸಾಲಿಯಾನ್ ,ಯತೀಶ್ ಕುಂದರ್ -ಅನು ಸುರೇಶ್ ಮುಂತಾದವರ ಜೊತೆ ಮಾತಾಡಿದೆ . ಇಡೀ ಸಮಾವೇಶದಲ್ಲಿ ಎಲ್ಲೂ ಯಾವುದಕ್ಕೂ ಚ್ಯುತಿ ಬಾರದಂತೆ - ತೊಂದರೆ ಆಗದ ಹಾಗೆ ಎಲ್ಲ ವ್ಯವಸ್ಥೆ ಮಾಡಿದ್ದರು.

ನಾ ಹೋದ ಗಳಿಗೆಯಲ್ಲಿ ಆಗಮಿಸಿದವರು ಜನಾರ್ದನ ಪೂಜಾರಿ -ಮತ್ತು ಅಭಯ ಚಂದ್ರ ಜೈನ್ ಅವರು(ಅದಕ್ಕೆ ಮೊದಲು ಆಗಮಿಸಿದ್ದವರು ಸಂಸದ ನಳಿನ್ ಕುಮಾರ್ ಕಟೀಲ್,ಯು ಟಿ ಖಾದರ್ ,ಜೆ ಆರ್ ಲೋಬೊ, ಎಂ ಎಲ್ ಎ ಮಂಗಳೂರ್ ಸೌತ್ , ಮೊಯ್ದಿನ್ ಬಾವ , ಮಂಗಳೂರು ನಾರ್ತ್,ರಮಾ ನಾಥ್ ರೈ ). ಇಬ್ಬರೂ ಮಡಿವಾಳರ ಸಂಘ- ಸಂಘಟನೆ ಭವಿಷ್ಯತ್ತಿನಲ್ಲಿ ಮುನ್ನಡೆಯಬೇಕಾದ -ಜಾಗತಿಕ ಬದಲಾವಣೆಗೊಳಪಡುವಿಕೆ ಇತ್ಯಾದಿ ಬಗ್ಗೆ ಮಾತಾಡಿದರು. ಆಗಮಿಸಿದ ಎಲ್ಲ ಅತಿಥಿಗಳಿಗೆ ಸನ್ಮಾನ ಸತ್ಕಾರ ನಡೆಯಿತು.

ಈ ಸಂದರ್ಭದಲ್ಲಿ ಸಮುದಾಯದ ಹಲ ಜನರನ್ನ ಅವರು ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸಿದ ಸೇವೆಗಳಿಗಾಗಿ ಸನ್ಮಾನಿಸಲಾಯಿತು. ಸತ್ಕಾರ ಸನ್ಮಾನ ನಂತರ ಸಮುದಾಯದ ಯುವಕ ಯುವತಿಯರು ಮಕ್ಕಳಿಂದ ಸಾಂಸ್ಕೃತಿಕ ಸೌರಭ ಕಾರ್ಯಕ್ರಮಗಳೂ ನಡೆದವು.
ಒಟ್ಟಿನಲ್ಲಿ ಅಚ್ಚುಕಟ್ಟಾಗಿ ನಡೆದ ಕಾರ್ಯಕ್ರಮ ಆತಿಥ್ಯ ನೀಡಿದವರಿಗೂ ಅತಿಥಿಗಳಿಗೂ ಸಂತಸ ತಂದಿತು .

ನಮ್ಮ ಮಡಿವಾಳ ಬಾಂಧವರು ಹೀಗೆ ಸಮಾವೇಶ ನಡೆಸಿ -ಸಂಘಟಿತರಾಗಿ -ಹಕ್ಕೊತ್ತಾಯ ಮಂಡಿಸಿದರೆ ಮೀಸಲಾತಿಗೆ ಒಳಪಟ್ಟು ಸಮುದಾಯ ಪ್ರಕಾಶಿಸುವುದರಲ್ಲಿ ಸಂಶಯವಿಲ್ಲ ..

ಶುಭವಾಗಲಿ

ಜೈ ವೀರ ಘಂಟಿ ಮಡಿವಾಳ ಮಾಚಿದೇವ

MADIVALA SAMVESHA HELD ON FEBRUARY 02- 2014 

SUNDAY IN MANGALORE DISTRICT-NEHRU 

GROUND. 

----------------------------------------------------------------------------------------------------------------------------
I was eager to attend the samvesha -flown to nearby udupi a day before and attended the samvesha on 2nd february at 12 noon- friend Ruthin Salian came near to entrance and took me to function hall- there was mammoth gathering of community-they have organised function very well -food-drinking water-cool drink-and book exibition cum sale-.. function hall was full and i saw many people standing in scorching sun and patiently witnessing function. i was pleasantly surprised when i saw our bangalore community mentor sri Ashok Dommalur sir ,we spoke-sat-eat together and ther till evening. function was attended by majority of politicians , and community heavyweights .

































MP NALIN KUMAR KATIL-EX MP JANARDHAN POOJARI-MLA'S -ministers Ramanath rai-u t khadar -moidin bava-jr lobo abhay chandra jain was also there- many of community persons who worked in diverse fields felicitated at the function. after that many cultural programmes were held by community youths and childrens.
totally it was a worth a watch and witness function ..

Rajaka Youths -well organised and managed the entire function-
I spoke with sudarshan salian -ruthin salian-anu suresh-praveen-yatish kunder and many more.

i wish many more such functions should be held and people meet-discuss -get organised and press for community demands to govts..

JAI VEERA GHANTI MADIVALA MACHDIEVA

links:

http://bit.ly/1nfHYCJ

http://bit.ly/1fNC62V

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ