ಗುರುವಾರ, ಸೆಪ್ಟೆಂಬರ್ 27, 2012









ಚಿತ್ರದುರ್ಗದ ಶ್ರೀ ಮಾಚಿದೇವ ಮಹಾ ಸಂಸ್ಥಾನ ಮಠದ ವತಿಯಿಂದ ಪ್ರಕಟಣೆಗೊಂಡ(ವರ್ಷ :೨೦೦೯)
ಶ್ರೀ ಬಸವ ಮಾಚಿದೇವ ಸ್ವಾಮೀಜಿಗಳು ಮತ್ತು ಡಾ: ಸಂಗಮೇಶ ಮ. ಕಲಹಾಳ ಅವರ ಸಂಪಾದನೆಯ 
"ಶ್ರೀ ಮಾಚಿದೇವ ಪ್ರಕಾಶ"(ಮಾಚಿದೇವರ ಜೀವನ ಸಂಕ್ಚಿಪ್ತ ಚರಿತ್ರೆ-ಚಿತ್ರ ಸಹಿತ ಹಾಗೂ ವಚನಗಳು ) ಎಂಬ 
ಪುಟ್ಟ ಪುಸ್ತಕದಲ್ಲಿನ ಪೂರ್ಣ ಅಂಶಗಳನ್ನು ನಮ್ಮ ಸರ್ವ ಸಹ ಮಡಿವಾಳ ಬಂಧುಗಳ ಜ್ಞಾನಾರ್ಜನೆಗಾಗಿ ಇಲ್ಲಿ ನೀಡಲಾಗಿದೆ..

ಕೃತಜ್ಞತೆ :
ಶ್ರೀ ಬಸವ ಮಾಚಿದೇವ ಸ್ವಾಮಿಜಿಗಳಿಗೆ ಮತ್ತು
ಡಾ: ಸಂಗಮೇಶ ಮ. ಕಲಹಾಳ
ಸನ್ನಿವೇಶಗಳಿಗೆ ತಕ್ಕಂತೆ ,ಕಣ್ಣಿಗೆ ಕಟ್ಟುವಂತೆ ರೇಖಾ ಚಿತ್ರಗಳನ್ನು ಬಿಡಿಸಿದ ಶ್ರೀಯುತ ವೆಂಕಟೇಶ ನಾಗಲಾಪುರ -ಕೊಪ್ಪಳ ಅವ್ರಿಗೆ

ಕೆಲವು ತಿಂಗಳುಗಳಿಂದ ಅಂತರ್ಜಾಲದಲ್ಲಿ ಮತ್ತು ಹಲವು ಪುಸ್ತಕ ಅಂಗಡಿಗಳಲ್ಲಿ ನಮ ಕುಲ ದೈವ -ಮೂಲ ಗುರು ಶ್ರೀ ಮಡಿವಾಳ ಮಾಚಿದೇವರ ಬಗ್ಗೆ ಬರೆದ ಬರಹಗಳನ್ನು ಪುಸ್ತಕಗಳನ್ನು ಹುಡುಕಿದ್ದೆ , ಆದರೆ ಸಿಕ್ಕಿರಲಿಲ್ಲ. ನನಗೆ ಬೇಕಾಗಿದ್ದುದು ಪೂರ್ಣವಾಗಿ ಶ್ರೀ ಮಡಿವಾಳ ಮಾಚಿದೇವರ ಜನನ - ಜೀವನ-ಸಾಧನೆ-ಯ ಬಗೆಗಿನ ವಿವರಗಳ ಪುಸ್ತಕ. ಆ ಬಗ್ಗೆ ಹಲವರಿಗೆ ಹೇಳಿ ಕೇಳಿ, ಕೊನೆಗೊಮ್ಮೆ ಅಂತರ್ಜಾಲದಲ್ಲ್ಲಿ ಯುವ ಮಡಿವಾಳ ರಕ್ಷಣಾ ವೇದಿಕೆಯಲ್ಲಿಯೂ ಈ ಬಗ್ಗೆ ಕೇಳಿದಾಗ ಮಲ್ಲೇಶ್ ಅವರು ಪ್ರೊ: ರಾಜಣ್ಣ ಎಂಬುವವರನ್ನು ಸಂಪರ್ಕಿಸಿ ಎಂದರು..

ಅವರನ್ನು ಸಂಪರ್ಕಿಸುವ ಮೊದಲೇ ದಿನಾಂಕ ೨೬-೦೮-೨೦೧೨ ರಂದು ಬೆಂಗಳೂರಿಗೆ ಆಗಮಿಸಿದ್ದ ಸಹೋದರ ಚಂದ್ರ ಶೇಖರ್ ಅಗಸರ್(ಯಾದಗೀರ ಯುವ ಮಡಿವಾಳ ಮುಖಂಡರು) ಅವರು ತಮ್ಮೊಡನೆ ಬೆಂಗಳೂರಿಗೆ ಬರುವಾಗ ತಮ್ಮೊಡನೆ ಶ್ರೀ ಮಡಿವಾಳ ಮಾಚಿದೇವರ ಬಗ್ಗೆ ಬರೆದ ಹಲವು ಪುಸ್ತಕಗಳನ್ನು ಮತ್ತು ನಮ್ ಸಂಘ ನಡೆಸುವ ಪತ್ರಿಕೆ -ನಮ್ ಇನ್ನಿತರ ಜಿಲ್ಲಾ ಸಂಘಗಳು ಆಯಾಯ ಜಿಲ್ಲೆಗಳಲ್ಲಿ ನಡೆಸಿದ ಸಭೆಗಳು- ಜನ ಸೇವೆ-ಮಡಿವಾಳ ಜಯಂತಿ ಆಚರಣೆ ಇತ್ಯಾದಿ ಬಗೆಗಿನ ವಿವರಗಳ ಪೇಪರ್ ಕಟ್ಟಿಂಗ್ಸ ಸಹಾ ತಂದಿದ್ದರು.. ಅವರು ತಂದ ಪುಸ್ತಕಗಳಲ್ಲಿ ನಮ್ ಜನಾಂಗದ ಬಗ್ಗೆ ಆಳವಾಗಿ ಅಭ್ಯಸಿಸಿ ವಿದ್ವಜನರೊಬ್ಬರು ಬರೆದ ಡಾಕ್ಟರೇಟ್ ಬರಹದ ಪುಸ್ತಕ ಸಹ ಇತ್ತು. ಆ ಬಗ್ಗೆ ಒಂದೊಂದಾಗಿ ದಿನಂಪ್ರತಿ ಈ ಪುಟಗಳಲ್ಲಿ ಹಂಚಿಕೊಳ್ಳುವೆ...

ತನ್ಮೂಲಕ ನಮ್ಮ ಸಮಸ್ತ ಮಡಿವಾಳ ಬಂಧುಗಳಿಗೆ ನಮ್ ಜನಾಂಗದ ಇತಿಹಾಸ -ವಿಶೇಷತೆ- ಕಷ್ಟ- ಕೋಟಲೆ- ತೊಂದ್ರೆ -ತಾಪತ್ರಯ-ಅವಕಾಶಗಳು-ಉದ್ಯೋಗಗಳು-ಮೀಸಲಾತಿ ಇತ್ಯಾದಿ ಬಗ್ಗೆ ಮಾಹಿತಿ ಸಿಕ್ಕು ಉಪಯೋಗವಾದರೆ ನಮಗದೇ ಸಂತಸದ ವಿಷ್ಯ...

ಒಂದೊಮ್ಮೆ ಫೇಸ್ಬುಕ್ -ಟ್ವಿಟ್ಟರ್ ಇತ್ಯಾದಿ ಸಾಮಾಜಿಕ ಜಾಲತಾಣಗಳು ನಿರ್ಬಂಧಿಸಲ್ಪಟ್ಟರೆ ಅಥವಾ ತಾಂತ್ರಿಕ ಕಾರಣಗಳಿಗಾಗಿ ಸಿಗದೇ ಹೋದರೆ ನಮ್ಮವರೊಡನೆ ಸಂಪರ್ಕ ಸಾಧಿಸಲು ಆಗಬಹುದೇನೋ? ಎಂಬ ಭಾವ ವ್ಯಕ್ತ ಆಗಿದ್ದರಿಂದ ಈ ತೊಂದರೆ(ಸಂಭಾವ್ಯ) ನಿವಾರಿಸಲು ನಮ್ಮದೇ ಒಂದು ಸ್ವಂತ ಜಾಲತಾಣ (ವೆಬ್ಸೈಟ್) ಮತ್ತು ವೆಬ್ ಬ್ಲಾಗ್ - ವೈವಾಹಿಕ ಮಾಹಿತಿ (ಮ್ಯಾಟ್ರಿ ಮನಿ)ತಾಣ ಆರಂಭಿಸುವ ಆಲೋಚನೆ ಬಂದಿದೆ...

>>.ಶೀಘ್ರದಲ್ಲಿಯೇ ಆ ಬಗೆಗಿನ ವಿವರಗಳನ್ನು ಇಲ್ಲಿ ಹಂಚಿಕೊಳ್ಳುವೆವು...

ಮೇಲೆ ತಿಳಿಸಿದ (ನಮ್ಮದೇ ಒಂದು ಸ್ವಂತ ಜಾಲತಾಣ (ವೆಬ್ಸೈಟ್) ಮತ್ತು ವೆಬ್ ಬ್ಲಾಗ್ - ವೈವಾಹಿಕ ಮಾಹಿತಿ (ಮ್ಯಾಟ್ರಿ ಮನಿ)ತಾಣ) ವಿಚಾರಗಳ ಬಗ್ಗೆ ಜ್ಞಾನ ಇರುವ ಮತ್ತು ಸಿದ್ಧಗೊಳಿಸುವ -ಅದರ ಉಸ್ತುವಾರಿ ನೋಡಿಕೊಳ್ಳಲು ಆಸಕ್ತಿ ಇರುವ ಮಡಿವಾಳ ಬಂಧುಗಳಿಗೆ ಸ್ವಾಗತ .. ಅದಕ್ಕೆಲ್ಲ ತಗುಲುವು ಖರ್ಚು ವೆಚ್ಚಗಳ ಬಗ್ಗೆ ತಿಳಿಸಬಹುದು
ಅದಕಾಗಿ ಅದ್ಯಕ್ಷರು - ಉಪಾದ್ಯಕ್ಚರನ್ನು ಸಂಪರ್ಕಿಸಲು ಕೋರಿಕೆ..


ಸರ್ವ ಮಡಿವಾಳ ಬಂಧುಗಳಿಗೆ ಶುಭವಾಗಲಿ...






ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :

====================




ಚಂದ್ರಶೇಖರ್ ಮಡಿವಾಳ -
ಯಾದಗೀರ ಜಿಲ್ಲೆ ಮಡಿವಾಳ
ಯುವ ಮುಖಂಡರು
9740003330


ಸರ್ವರಿಗೂ ಶುಭವಾಗಲಿ





*****ಜೈ ಕುಲ ಮೂಲ ಗುರು ಶ್ರೀ ವೀರ ಘಂಟಿ ಮಡಿವಾಳ ಮಾಚಿದೇವ****

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ